ಈ ಬಾರಿ ಕಡೆ ಬೋಳಿ ಕೈಲಾಸಕ್ಕೆ ಹೋಗಲೆಬೇಕು ನಮ್ಮ ಕನಸನ್ನು ನನಸಾಗಿಸಬೇಕು, ಹಾಗೋ ವನಪಾಲಕರು ಹೇಗೆ ಆ ಕಾಡನ್ನು ರಕ್ಷೀಸಿದ್ದಾರೆ ಎಂದು ನೋಡುವ ತವಕ ನೆರವೇರಿರಲಿಲ್ಲ. ಮಾದಪ್ಪ ಈ ಬಾರಿ ನಮಗೆ ಕರುಣೆ ತೋರಿದ ರಾತ್ರಿ ಚಂಗಡಿಯಲ್ಲಿದ್ದು,ಬೆಳಗಿನ 6 ಘಂಟೆಗೆ ಕಡೆಬೋಳಿಕಡೆಗೆ ಹೋರಟು, 9 ಘಂಟೆಗೆ ದೇವಾಲಯ ಕಾಡು ತಲುಪಿದೆವು. ನಂತರ ಕಡೆಬೋಳಿ ಶಂಕರನ ದೇವಾಸ್ಥನಕ್ಕೆ 1ಘಂಟೆಗೆ ತಲುಪಿದೆವು. ಅಲ್ಲಿ ಚಪ್ಪಲಿಗಳನ್ನು ಬಿಡಬೇಕು ಬರಿಗಾಲಲ್ಲಿ ನಡೆಯಲು ಪ್ರಾರಂಬಿಸಿದೆವು.  ಇದೂಂದು ವಿಚಿತ್ರ ಅನುಬವ  ಕಾಲಿಟ್ಟರೆ ಕಟ್ಟಿರುವ ಪಾಚೀಯ ಮಣ್ಣಲ್ಲಿ ಕಾಲು ಊತುಹೋಗಿ ಜಾರುತ್ತವೆ ಕೆಳಗೆ ಜಾರಿ ಬೀಳದೆ  ನಡೆಯಲು  ಸಾದ್ಯವಿಲ್ಲ …. ನಾನು ಬೇಳಲಿಲ್ಲ ಮಳೆಕಾಡುವಿನಲ್ಲಿ ಪಾಚೀಹಿಡಿದ ಮರಗಳನ್ನು ನೋಡಲು ರೋಮಾಂಚನಕಾರಿ, ಮಳೆಕಾಡನ್ನು ಹತ್ತಿ ಮುಂದೆ ಸಾಗಿದರೆ ಕೈಲಾಸಬೋಳಿ(ಚಿನ್ನದಗಿರಿ) ರುದ್ರರಮಣೀಯ ಸ್ಥಳ 77 ಮಲೆಗಳು ಇಲ್ಲಿಗೆ ಕಾಣಿಸುತ್ತವೆ. ಕಾವೇರಿಯ ವಿವಾಂಗಮ ನೋಟ ಮಲೆ ಮಹದೇಶ್ವರ ಸ್ವಾಮಿಯ ಗುಡಿ ತಮಿಳುನಾಡಿನ ಪರ್ವತಶ್ರೇಣಿಗಳು ನಿಜವಾದ ಕೈಲಾಸವನ್ನು ಸ್ರುಷ್ಟಿಸಿಬಿಟ್ಟಿವೆ. ಇಲ್ಲಿ ಕಡಿದಾದ ಪ್ರದೇಶದಲ್ಲಿ ವೀರೇಶ ಶಂಕರನಗುಡಿ ಇದೆ ವೀರಪ್ಪನ್ ಇದ್ದ ಕಾಲಲ್ಲಿದ್ದ ಕಾಡಿಗಿಂತ ಈಗ ಅತೀಹೆಚ್ಚು ಅರಣ್ಯಪ್ರದೇಶ ಆವರಿಸಿಕೊಂಡಿದೆ ಕಾಡ್ಗಿಚ್ಚನ್ನು ತಡೆದಿದ್ದಾರೆ.ಕಾಡಿನ ಮರಗಳಿಗೆ ಒಂದು ಮಚ್ಚೀನೇಟು ಸಹ ಬಿದ್ದಿಲ್ಲ. ಈ ರಕ್ಷೀತಪ್ರದೇಶವನ್ನು ವನಪಾಲಕರು ಹಗಲು ರಾತ್ರಿ ಶ್ರಮವಹಿಸಿ ರಕ್ಷೀಸಿದ್ದಾರೆ ಅವರಿಗೆ ಈ ಪ್ರದೇಶ ಚಾಮರಾಜನಗರ ಗಿರಿಪಂಕ್ತಿಗಳಲ್ಲಿ ಎತ್ತರದ ಸ್ಥಾನದಲ್ಲಿದೆ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ಆಪಾರ ಜನರು ರಸ್ತೆಗಳಲ್ಲಿ ಸಿಗುವ ಪ್ರಾಣಿಗಳಿಗೆ ಆಹಾರ ಹಾಕುತ್ತಾರೆ ದಯಾಮಾಡಿ ಹಾಕಬೇಡಿ ಕಾಡಿನಲ್ಲಿ ಆಪಾರ ಜಾತಿಯ ಹಣ್ಣುಗಳಿವೆ ಅವುಗಳನ್ನು ತಿಂದು ಬೀಜಪ್ರಸಾರವಾಗದಿದ್ದರೆ ಹೊಸ ಹೊಸ ಸಸ್ಯಕಾಶಿ ಬೆಳೆವುದನ್ನು ನಾವೆ ನಿಲ್ಲಿಸಿದಂತಾಗುತ್ತದೆ. ಹಾಗೋ ಅಪಘಾತಗಾಳಗಿ ಪ್ರಾಣಿಗಳು ಸಾಯುತ್ತವೆ ಇತ್ತೀಚೆಗೆ ಆನೆಗಳು ರಸ್ತೆಗೆ ಬರಲು ಪ್ರಾರಂಬಿಸಿವೆ ಈಗ ರಸ್ತೆ.. ಬೆಟ್ಟದ ಅಭಿವ್ರದ್ದಿಯಂತು ಅದ್ಭುತವಾಗಿ ಸಾಗುತ್ತಿದೆ ಆಡಳಿತಧಿಕಾರಿಗಳಿಗೆ ಒಟ್ಟಾರೆ ನಾವುಕಂಡ ವೀರಪ್ಪನ್ ಕಾಡಿಗೋ ಈಗಿನ ಕಾಡು ಬೆಳವಣಿಗೆಗೆ ವನ್ಯ ರಕ್ಷಕರು ಆದರು ಇದರಮದ್ಯೆ ಪ್ರಾಣಿಗಳನ್ನುಕೊಲ್ಲವ ದುಷ್ಟ ವ್ಯಕ್ತಿಗಳಿದ್ದಾರೆ….ಇದೆಲ್ಲ ತಡೆಯುವ  ವ್ಯವಸ್ಥೆಗೆ ವಿಚಾರ ಮುಟ್ಟಿಸುವ ಮನಸ್ಸಿರಬೇಕು ಇವರಜೊತೆ ನಮ್ಮಆಸ್ತಿಎಂದು ವ್ಯವಸ್ಥಯೊಂದಿಗೆ  ಕೈಜೋಡಿಸಬೇಕು…ಕಾಡು ಉಳಿವು ಮನುಕುಲದ ಉಳಿವು…. ಈ ಪ್ರದೇಶಗಳಿಗೆ ಅನುಮತಿಗಳಲ್ಲದೆ ಪ್ರವೇಶವಿಲ್ಲ.